ಇವರು ಕನ್ನಡ ಮತ್ತು ತುಳುವಿನ ಕವಿ, ವಿಮರ್ಶಕ, ಕನ್ನಡ ಪ್ರಾಧ್ಯಾಪಕರು,ಸಂಶೋಧಕರು. == ಹುಟ್ಟು == ಧನಂಜಯ ಕುಂಬ್ಳೆ ಇವರು ಕಾಸರಗೋಡು ಜಿಲ್ಲೆಯ ಕಾಸರಗೋಡು ತಾಲೂಕಿನ ಕುಂಬ್ಳೆ ಗ್ರಾಮದಲ್ಲಿ ಜನಿಸಿದರು. ತಂದೆ ನಾರಾಯಣ ಎಂ, ತಾಯಿ ಶಾರದ. == ವಿದ್ಯಾಭ್ಯಾಸ == ಇವರು ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಅಜ್ಜಿಬೆಟ್ಟು ಕಿರಿಯ ಪ್ರಾಥಮಿಕ ಶಾಲೆ ಬಂಟ್ವಾಳ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಬ್ಳೆಯಲ್ಲಿ,ಪ್ರೌಡಶಾಲೆಯನ್ನು ಸರಕಾರಿ ಪ್ರೌಡಶಾಲೆ ಕುಂಬ್ಳೆಯಲ್ಲಿ,ಕಾಲೇಜು ಶಿಕ್ಷಣವನ್ನು ಸರಕಾರಿ ಕಾಲೇಜು ಕಾಸರಗೋಡುವಿನಲ್ಲಿ ಮುಗಿಸಿದ್ದಾರೆ.ಹಾಗೆನೆ ಕಣ್ಣೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿ,ಅದುವೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. == ಪಿಹೆಚ್.ಡಿ == ಅರುಣಾಬ್ಜ ಮತ್ತು ಕುಮಾರವ್ಯಾಸ ತೌಲನಿಕ ಅಧ್ಯಯನ. == ಉದ್ಯೋಗ == ವಿವೇಕಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರು-೧೯೯೯-೨೦೦೫. ಆಳ್ವಾಸ್ ಕಾಲೇಜು ಮೂಡಬಿದ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕರು-೨೦೦೫-೨೦೧೨. ಪ್ರಸ್ತುತ ಇವರು ಮಂಗಳೂರು ವಿಶ್ವವಿದ್ಯಾನಿಲಯದ ಎಸ್,ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿತ್ತಿದ್ದಾರೆ. == ನಿರ್ವಹಿಸಿದ ಹುದ್ದೆಗಳು == ಶ್ರೀ ಪಿ.ಸತೀಶ್ ಪೈ ಮತ್ತು ಪಿ.ದಯಾನಂದ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿ‍ರ್ದೇಶಕರು . ಮಂಗಳೂರು ವಿವಿಯ ಪ್ರಸಾರಾಂಗದ ಸಹ ನಿರ್ದೇಶಕರು ಮಂಗಳೂರು ವಿವಿಯ ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕರು ಮಂಗಳೂರು ವಿವಿ ಸಾಂಸ್ಕೃತಿಕ ನೀತಿ ಸಮಿತಿಯ ನೋಡಲ್ ಆಫೀಸರ್ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ == ಪರಿಣತಿ == ೮ ಮಂದಿ ಇವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ನಡೆಸುತ್ತಿದ್ದಾರೆ. == ಬರೆದ ಕೃತಿಗಳು == === ಕವನ ಸಂಕಲನ === ಮೊದಲ ಪಾಪ ಹಾಡು ಕಲಿತ ಹಕ್ಕಿಗೆ ಹಣತೆ ಹಾಡು === ವಿಮರ್ಶೆ === ನಾನು ಮತ್ತು ಆಕಾಶ === ವ್ಯಕ್ತಿ ಚಿತ್ರ === ನಿರಂಜನ ವ್ಯಕ್ತಿ ಚಿತ್ರ. ಕಜಂಪಾಡಿ ರಾಮ ವ್ಯಕ್ತಿ ಚಿತ್ರ. == ಸಂಶೋಧನ ಕೃತಿಗಳು == === ಸಂಪಾದಿತ ಕೃತಿಗಳು === == ಪ್ರಶಸ್ತಿ == ಮುಂಬಯಿ ಕರ್ನಾಟಕ ಸಂಘ ನೀಡುವ "ಪೇಜಾವರ ಸದಾಶಿವರಾವ್ ಕಾವ್ಯ ಪ್ರಶಸ್ತಿ". ಕಾಂತಾವರ ಕನ್ನಡ ಸಂಘದ "ಮುದ್ದಣ ಕಾವ್ಯ ಪ್ರಶಸ್ತಿ" ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಮಯೂರವರ್ಮ ಪ್ರಶಸ್ತಿ. == ಉಲ್ಲೇಖ ==